Widgets Magazine

ಡ್ರಗ್ ಮಾಫಿಯಾ: ಅಕುಲ್ ರೆಸಾರ್ಟ್ ನಲ್ಲಿ ಸ್ಟಾರ್ ಗಳಿಗಾಗಿ ನಡೀತಿತ್ತಾ ಡ್ರಗ್ಸ್ ಪಾರ್ಟಿ?!

ಬೆಂಗಳೂರು| Krishnaveni K| Last Modified ಶನಿವಾರ, 19 ಸೆಪ್ಟಂಬರ್ 2020 (10:26 IST)
ಬೆಂಗಳೂರು: ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಅಕುಲ್ ಬಾಲಾಜಿ ಒಡೆತನದ ರೆಸಾರ್ಟ್ ನಲ್ಲಿ ವೀಕೆಂಡ್ ನಲ್ಲಿ ನಡೆಯುತ್ತಿದ್ದ ಪಾರ್ಟಿಯಲ್ಲಿ ಡ್ರಗ್ ಸಮಾರಾಧನೆಯಾಗುತ್ತಿತ್ತಾ? ಹೀಗೊಂದು ಅನುಮಾನದ ಮೇಲೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
 

ಅಕುಲ್ ಒಡೆತನದ ರೆಸಾರ್ಟ್ ನಲ್ಲಿ ಆಗಾಗ ಪಾರ್ಟಿ ನಡೀತಾ ಇತ್ತು. ಅಲ್ಲಿಗೆ ಸ್ಟಾರ್ ನಟರು, ಅವರ ಪತ್ನಿಯರು ಬರುತ್ತಿದ್ದರು. ರಾಗಿಣಿ, ಸಂಜನಾ ಕೂಡಾ ಅಲ್ಲಿರುತ್ತಿದ್ದರು. ಈ ವೇಳೆ ಡ್ರಗ್ ಸರಬರಾಜಾಗುತ್ತಿತ್ತು ಎಂಬ ಅನುಮಾನ ಸಿಸಿಬಿ ಪೊಲೀಸರದ್ದು. ಇದೇ ನಿಟ್ಟಿನಲ್ಲಿ ಅವರೀಗ ಅಕುಲ್ ರನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :