ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿಗೆ ತಮ್ಮ ಮೇಲೆ ಸಿಸಿಬಿ ದಾಳಿ ನಡೆಸುವ ಬಗ್ಗೆ ಮೊದಲೇ ಮುನ್ಸೂಚನೆಯಿತ್ತು. ಹೀಗಾಗಿ ಇದಕ್ಕೆ ಅವರು ಮೊದಲೇ ಸಿದ್ಧತೆ ನಡೆಸಿದ್ದರು. ತಮ್ಮ ಮನೆಗೆ ದಾಳಿ ನಡೆಸಿದರೂ ಯಾವುದೇ ಸಾಕ್ಷ್ಯ ಸಿಗದಂತೆ ಸಂಜನಾ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಮನೆಯಲ್ಲಿದ್ದ ವಿದೇಶ ಪ್ರಯಾಣದ ದಾಖಲೆಗಳನ್ನು ನಾಶ ಮಾಡಿದ್ದಾರೆ. ಅಕ್ಕಪಕ್ಕದ ನಿವಾಸಿಗಳ ಜತೆ ಮಾತನಾಡಿ ತಮ್ಮ ಬಗ್ಗೆ ಮಾಹಿತಿ