ಮುಂಬೈ: ದೇಶದಾದ್ಯಂತ ಕೊರೋನಾವೈರಸ್ ಹಾವಳಿ ಜಾಸ್ತಿಯಾಗುತ್ತಿದ್ದಂತೇ ಕ್ರೀಡೆ, ಸಿನಿಮಾ ಲೋಕದ ಸೆಲೆಬ್ರಿಟಿಗಳು ಸೋಷಿಯಲ್ ಮೀಡಿಯಾದಲ್ಲಿ ಹೊಸ ಅಭಿಯಾನ ಶುರು ಮಾಡಿಕೊಂಡಿದ್ದಾರೆ.ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಸೂಚನೆಯಂತೆ ಕೊರೋನಾದಿಂದ ಪಾರಾಗಲು ಕೈಗಳನ್ನು ಹೇಗೆ ಶುಚಿಗೊಳಿಸಬೇಕೆಂಬುದನ್ನು ವಿಡಿಯೋ ಪ್ರಾತ್ಯಕ್ಷಿಕೆ ಮೂಲಕ ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ಇಷ್ಟಬಂದವರಿಗೆ ಟ್ಯಾಗ್ ಮಾಡಿ ಚಾಲೆಂಜ್ ಸ್ವೀಕರಿಸುವಂತೆ ಜಾಗೃತಿ ಅಭಿಯಾನವನ್ನು ಹರಡುತ್ತಿದ್ದಾರೆ.ಇದಕ್ಕೆ ಸೇಫ್ ಹ್ಯಾಂಡ್ ಚಾಲೆಂಜ್ ಎಂಬ ಹ್ಯಾಷ್