ಆತ್ಮಹತ್ಯೆ ಪ್ರಯತ್ನಕ್ಕೆ ಮುನ್ನ ವಿಡಿಯೋ ಮಾಡಿದ ಚೈತ್ರಾ ಕೊಟೂರ್

ಬೆಂಗಳೂರು| Krishnaveni K| Last Modified ಶುಕ್ರವಾರ, 9 ಏಪ್ರಿಲ್ 2021 (08:53 IST)
ಬೆಂಗಳೂರು: ಮಾಜಿ ಸ್ಪರ್ಧಿ ಚೈತ್ರಾ ಕೋಟೂರು ಆತ್ಮಹತ್ಯೆ ಪ್ರಯತ್ನಿಸಿದ್ದು, ಇದಕ್ಕೂ ಮೊದಲು ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

 
ನಿನ್ನೆ ಬೆಳಿಗ್ಗೆ ಚೈತ್ರಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಇದೀಗ ಅವರನ್ನು ಕೋಲಾರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆತ್ಮಹತ್ಯೆಗೆ ಮುನ್ನ ಅವರು ತಮ್ಮ ಇತ್ತೀಚೆಗಿನ ಮದುವೆ ವಿವಾದದ ಬಗ್ಗೆ ಹೇಳಿಕೊಂಡು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
 
ಇತ್ತೀಚೆಗಷ್ಟೇ ಚೈತ್ರಾ ತಾವು ಪ್ರೀತಿಸಿದ್ದ ನಾಗಾರ್ಜುನ ಎಂಬವರ ಜೊತೆ ವಿವಾಹವಾಗಿದ್ದರು. ಆದರೆ ಈ ವಿವಾಹ ನಾಗಾರ್ಜುನಗೆ ಇಷ್ಟವಿರಲಿಲ್ಲ. ಬಲವಂತವಾಗಿ ಮದುವೆ ಮಾಡಿಸಲಾಗಿದೆ ಎಂದು ವಿವಾದವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.
 
ಇದೇ ವಿಚಾರದಲ್ಲಿ ಮನನೊಂದಿದ್ದ ಚೈತ್ರಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಸಾವಿನ ಪ್ರಯತ್ನಕ್ಕೆ ಮೊದಲು ವಿಡಿಯೋ ಮಾಡಿದ್ದ ಚೈತ್ರಾ ನೀನು ನನ್ನನ್ನು ಮದುವೆಯಾಗಲ್ಲ ಎಂದರೆ ಯಾಕೆ ನನ್ನ ಹತ್ತಿರ ಬಂದೆ? ಯಾಕೆ ನನ್ನ ಜೀವನದಲ್ಲಿ ಬಂದೆ ಎಂದೆಲ್ಲಾ ಅಳುತ್ತಾ ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :