ಬೆಂಗಳೂರು: ಕಿಚ್ಚ ಸುದೀಪ್-ಎಂಎನ್ ಕುಮಾರ್ ನಡುವಿನ ವಿವಾದಕ್ಕೆ ನಾಂದಿ ಹಾಡಿದ್ದು ನಿರ್ಮಾಪಕ ಸೂರಪ್ಪ ಬಾಬು ಎಂಬ ಚಕ್ರವರ್ತಿ ಚಂದ್ರಚೂಡ್ ಆರೋಪಕ್ಕೆ ನಿನ್ನೆ ಸೂರಪ್ಪ ಬಾಬು ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಈಗ ಚಂದ್ರಚೂಡ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3 ಸಿನಿಮಾ ನಿರ್ಮಾಪಕ ಸೂರಪ್ಪ ಬಾಬು ಕುಮ್ಮಕ್ಕಿನಿಂದಲೇ ನಿರ್ಮಾಪಕ ಎಂಎನ್ ಕುಮಾರ್ ಆರೋಪ ಹೊರಿಸಿದ್ದರು ಎಂದು ಚಕ್ರವರ್ತಿ ಚಂದ್ರಚೂಡ್ ಯೂ ಟ್ಯೂಬ್ ವಾಹಿನಿಯಲ್ಲಿ ಆರೋಪಿಸಿದ್ದರು. ಸುದೀಪ್ ಆಪ್ತರಾಗಿರುವ