ಡಿಕೆ ರವಿ ಪಾತ್ರ ಮಾಡ್ತಾರಾ ಚಕ್ರವರ್ತಿ ಚಂದ್ರಚೂಡ್?

ಬೆಂಗಳೂರು| Krishnaveni K| Last Modified ಶುಕ್ರವಾರ, 11 ಜೂನ್ 2021 (09:21 IST)
ಬೆಂಗಳೂರು: ಬಿಗ್ ಬಾಸ್ 8 ರ ಖ್ಯಾತಿಯ ಬರಹಗಾರ ಚಕ್ರವರ್ತಿ ಚಂದ್ರಚೂಡ್ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಪಾತ್ರ ಮಾಡಲು ತನಗೆ ಆಫರ್ ಬಂದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

 
ತಮ್ಮ ಫೇಸ್ ಬುಕ್ ಪುಟದಲ್ಲಿ ಚಂದ್ರಚೂಡ್, ಸಾರಾ ಮಹೇಶೂ ಡಿಕೆ ರವಿ ಪಿಕ್ಚರ್ ತೆಗೀತಾರಂತೆ. ಇತ್ತ ರೋಹಿಣಿ ಸಿಂದೂರಿ ಸಿನಿಮಾ ಘೋಷಣೆಯಾಗಿದೆ.  ನಿನ್ನೆ ಹೊಸ ಡೈರೆಕ್ಟರ್ ಡಿಕೆ ರವಿ ಪಾತ್ರ ಮಾಡ್ತೀರಾ ಅಂತ ಕೇಳಿದ್ರು. ಎರಡು ಕಂಡೀಷನ್ ಹಾಕಿದ್ದೀನಿ. ಆ 37 ಮೆಸೇಜ್ ತೋರಿಸ್ತೀರಾ ಸಿನಿಮಾದಲ್ಲಿ?  ಇನ್ನೊಂದು **** (ದುಡ್ಡಲ್ಲ) ನೋಡಣ.. ಮುಂದಾ..’ ಎಂದು ಬರೆದುಕೊಂಡಿದ್ದಾರೆ.
 
ಯಾವ ಸಿನಿಮಾ, ಯಾವ ಡೈರೆಕ್ಟರ್ ಎಂಬ ಗುಟ್ಟನ್ನು ಚಕ್ರವರ್ತಿ ಚಂದ್ರಚೂಡ್ ಬಿಟ್ಟುಕೊಟ್ಟಿಲ್ಲ. ಮೊನ್ನೆಯಷ್ಟೇ ರೋಹಿಣಿ ಸಿಂದೂರಿ ಕುರಿತ ಸಿನಿಮಾವಾಗಲಿದೆ ಎಂಬ ಸುದ್ದಿ ಬಂದಿತ್ತು. ಅದೇ ಸಿನಿಮಾದಲ್ಲೇ ಚಂದ್ರಚೂಡ್ ರವಿ ಪಾತ್ರ ಮಾಡುತ್ತಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ.
ಇದರಲ್ಲಿ ಇನ್ನಷ್ಟು ಓದಿ :