ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ಸಿನಿಮಾ ಅನೌನ್ಸ್

ಬೆಂಗಳೂರು| Krishnaveni K| Last Modified ಗುರುವಾರ, 15 ಜುಲೈ 2021 (09:38 IST)
ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ಹೊಸ ಸಿನಿಮಾ ಘೋಷಣೆಯಾಗಿದೆ. ಇದು ಡಿ ಬಾಸ್ ಅವರ 55 ನೇ ಸಿನಿಮಾಗಲಿದೆ.
 > ಈ ಹಿಂದೆ ಸೂಪರ್ ಹಿಟ್ ಆಗಿದ್ದ ‘ಯಜಮಾನ’ ಸಿನಿಮಾ ತಂಡವೇ ಈ ಸಿನಿಮಾವನ್ನೂ ಮಾಡುತ್ತಿದೆ. ಶೈಲಜಾ ನಾಗ್ ನಿರ್ಮಾಣ ಮಾಡುತ್ತಿದ್ದು, ವಿ. ಹರಿಕೃಷ್ಣ ಪೂರ್ಣ ಪ್ರಮಾಣದ ನಿರ್ದೇಶಕರಾಗಲಿದ್ದಾರೆ. ದರ್ಶನ್ ಜೊತೆಗೆ ಈ ಸಿನಿಮಾದ ಮಾತುಕತೆಯೂ ನಡೆದಿದೆ.>   ಟೈಟಲ್ ಸೇರಿದಂತೆ ಉಳಿದ ಮಾಹಿತಿಗಳನ್ನು ಸದ್ಯದಲ್ಲೇ ಚಿತ್ರತಂಡ ಘೋಷಣೆ ಮಾಡಲಿದೆ. ರಾಬರ್ಟ್ ದರ್ಶನ್ ರ 53 ನೇ ಸಿನಿಮಾವಾಗಿತ್ತು. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ 54 ನೇ ಸಿನಿಮಾವನ್ನೂ ಅವರು ಈಗಾಗಲೇ ಒಪ್ಪಿಕೊಂಡಿದ್ದಾರೆ. ಇದೀಗ ಯಜಮಾನ ತಂಡ ಅವರ 55 ನೇ ಸಿನಿಮಾವನ್ನು ಮಾಡಲು ಹೊರಟಿದೆ.ಇದರಲ್ಲಿ ಇನ್ನಷ್ಟು ಓದಿ :