ಅಳಿಯನ ಚಿತ್ರದ ಟ್ರೈಲರ್ ಇಂದು ಡಿ ಬಾಸ್ ದರ್ಶನ್ ರಿಂದ ಬಿಡುಗಡೆ

ಬೆಂಗಳೂರು| Krishnaveni K| Last Modified ಶನಿವಾರ, 7 ಸೆಪ್ಟಂಬರ್ 2019 (09:36 IST)
ಬೆಂಗಳೂರು: ಪುಟ್ಟ ಗೌರಿ ಮದುವೆ ಖ್ಯಾತಿಯ ರಂಜಿನಿ ರಾಘವನ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಂಬಂಧಿ ಮನೋಜ್ ನಾಯಕರಾಗಿ ಅಭಿನಯಿಸಿರುವ ಟಕ್ಕರ್ ಸಿನಿಮಾ ಟ್ರೈಲರ್ ಇಂದು ಬಿಡುಗಡೆಯಾಗಲಿದೆ.
 > ಇಂದು ಸಂಜೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟಕ್ಕರ್ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಸ್ಟಾರ್ ನಟರಿಂದ ಹೊಸಬರ ಚಿತ್ರದ ಟ್ರೈಲರ್, ಟೀಸರ್ ಬಿಡುಗಡೆ ಮಾಡಿಸಿ ಅದಕ್ಕೆ ಹೆಚ್ಚಿನ ಪ್ರಚಾರ ಕೊಡುವ ಪ್ರಯತ್ನ ನಡೆಸಲಾಗುತ್ತಿದೆ.>   ಆ ಪೈಕಿ ಟಕ್ಕರ್ ಕೂಡಾ ಸೇರಿಕೊಂಡಿದೆ. ಹೇಳಿ ಕೇಳಿ ಅಳಿಯನ ಸಿನಿಮಾ. ಹೀಗಾಗಿ ದರ್ಶನ್ ಚಿತ್ರದ ಬಗ್ಗೆ ವಿಶೇಷ ಆಸಕ್ತಿ ಹೊಂದಿರುತ್ತಾರೆ. ಇಂದೇ ಅಡಿಯೋ ಕೂಡಾ ರಿಲೀಸ್ ಆಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :