ಬೆಂಗಳೂರು: ಆಷಾಢ ಮಾಸ ಆರಂಭವಾದ ಹಿನ್ನಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಡದೇವತೆ ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.ದರ್ಶನ್ ಆಗಾಗ ಚಾಮುಂಡೇಶ್ವರಿ ದರ್ಶನ ಪಡೆದು ಪೂಜೆ ಸಲ್ಲಿಸುತ್ತಿರುತ್ತಾರೆ. ಈಗ ವಿಶೇಷ ದಿನದಂದು ತಮ್ಮ ಸ್ನೇಹಿತರ ಜತೆಗೂಡಿ ಬಂದು ದೇವಿಯ ದರ್ಶನ ಪಡೆದಿದ್ದಾರೆ.ನಮ್ಮ ಪವರ್ ಇರೋದೇ ಆ ತಾಯಿ ಆಶೀರ್ವಾದದ ಮೇಲೆ. ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಆ ತಾಯಿ ಆಶೀರ್ವಾದ ಪಡೆಯಲು ಬಂದೆ ಎಂದು ಮಾಧ್ಯಮಗಳಿಗೆ ದರ್ಶನ್ ಪ್ರತಿಕ್ರಿಯಿಸಿದರು.