ಬೆಂಗಳೂರು: ತೆಲುಗು ಧಾರವಾಹಿ ಸೆಟ್ ನಲ್ಲಿ ನಡೆದಿತ್ತು ಎನ್ನಲಾದ ಹಲ್ಲೆ ವಿಡಿಯೋ ವೈರಲ್ ಆದ ಬಳಿಕ ಇದೀಗ ಕಿರುತೆರೆ ನಟ ಚಂದನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಪೋಸ್ಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.ಕ್ಯಾಮರಾ ಮ್ಯಾನ್ ಗೆ ಮೊದಲು ಚಂದನ್ ಹಲ್ಲೆ ಮಾಡಿದ್ದರು. ಇದೇ ಕಾರಣಕ್ಕೆ ತಂತ್ರಜ್ಞರು ಅವರ ವಿರುದ್ಧ ತಿರುಗಿಬಿದ್ದಿದ್ದರು ಎನ್ನಲಾಗಿತ್ತು. ಇದಕ್ಕೆ ಕಾರಣ ತಮ್ಮ ಅಮ್ಮನ ಅನಾರೋಗ್ಯದ ಬಗ್ಗೆ ಇದ್ದ ಚಿಂತೆ. ಇದರಿಂದಾಗಿಯೇ ಅಂದು ಚಂದನ್ ತಾಳ್ಮೆ ಕಳೆದುಕೊಂಡಿದ್ದರು