ಬೆಂಗಳೂರು: ಕಿರುತೆರೆಯ ಮೋಸ್ಟ್ ವಾಂಟೆಡ್ ಎಲಿಜಿಬಲ್ ಬ್ಯಾಚುಲರ್ ಚಂದನ್ ಕುಮಾರ್ ತಮ್ಮ ಮದುವೆಯ ಬಗ್ಗೆ ಬಂದ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಟ ಚಂದನ್ ಸದ್ಯದಲ್ಲೇ ಅಮ್ಮ ತೋರಿಸಿದ ಮೈಸೂರು ಮೂಲದ ಹುಡುಗಿಯನ್ನು ಮದುವೆಯಾಗಲಿದ್ದಾರೆ. ಹೀಗಂತ ಅವರೇ ತೆಲುಗು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಅದೆಲ್ಲಾ ಸುಳ್ಳು ಎಂದು ಚಂದನ್ ಸ್ಪಷ್ಟಪಡಿಸಿದ್ದಾರೆ.ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿರುವ ಚಂದನ್ ಇದೆಲ್ಲಾ ಸುಳ್ಳು ಸುದ್ದಿಗಳು. ಈ