Widgets Magazine

ಕಿರುತೆರೆ ಸೂಪರ್ ಹಿಟ್ ಚಂದನ್-ಕವಿತಾ ಗೌಡ ನಡುವೆ ಕುಚ್ ಕುಚ್ ಇದೆಯಾ?!

ಬೆಂಗಳೂರು| Krishnaveni K| Last Modified ಶನಿವಾರ, 1 ಆಗಸ್ಟ್ 2020 (12:57 IST)
ಬೆಂಗಳೂರು: ಕಿರುತೆರೆಯ ಖ್ಯಾತ ನಟ ಚಂದನ್ ಕುಮಾರ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ನಟಿ ಜತೆ ಆತ್ಮೀಯವಾಗಿರುವ ಫೋಟೋ ಪ್ರಕಟಿಸಿರುವುದು ಅಭಿಮಾನಿಗಳು ಹುಬ್ಬೇರುವಂತೆ ಮಾಡಿದೆ.

 
ಚಂದನ್-ಕವಿತಾ ಗೌಡ ಹಿಂದೆ ಲಕ್ಷ್ಮೀ ಬಾರಮ್ಮಾ ಧಾರವಾಹಿಯಲ್ಲಿ ಜೋಡಿಯಾಗಿ ನಟಿಸಿದ್ದರು. ಅದಾದ ಬಳಿಕ ಇಬ್ಬರೂ ಉತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ.
 
ಮೊನ್ನೆಯಷ್ಟೇ ಕವಿತಾ ಬರ್ತ್ ಡೇಗೆ ಚಂದನ್ ಹಾಗೂ ನಟ ದಿಲೀಪ್ ಶೆಟ್ಟಿ ಅವರ ಮನೆಗೇ ಹೋಗಿ ಸರ್ಪ್ರೈಸ್ ಉಡುಗೊರೆ ಕೊಟ್ಟಿದ್ದರು. ಅದೇ ದಿನದ ಫೋಟೋವೊಂದನ್ನು ಚಂದನ್ ತಮ್ಮ ಇನ್ ಸ್ಟಾಗ್ರಾಂನಲ್ಲಿ ತಮ್ಮ ಅಭಿಮಾನಿಗಳ ಕೋರಿಕೆಯ ಮೇರೆಗೆ ಎಂದು ಅಡಿಬರಹದೊಂದಿಗೆ ಪ್ರಕಟಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಅಭಿಮಾನಿಗಳು ನೀವು ಇಬ್ಬರೂ ಒಳ್ಳೆ ಜೋಡಿ, ನಿಜ ಜೀವನದಲ್ಲೂ ಮದುವೆ ಆಗಿ ಎಂದು ಮನವಿ ಮಾಡಿದ್ದಾರೆ. ಮತ್ತೆ ಕೆಲವರು ನೀವು ಲವ್ ಮಾಡ್ತಿದ್ದೀರಾ ಎಂದು ನೇರವಾಗಿ ಕೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :