ಬೆಂಗಳೂರು: ಕಿರುತೆರೆಯ ಮೋಸ್ಟ್ ವಾಂಟೆಡ್ ಜೋಡಿ ಚಂದನ್ ಕುಮಾರ್-ಕವಿತಾ ಗೌಡ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಇಬ್ಬರೂ ತಮ್ಮಿಬ್ಬರ ನಿಶ್ಚಿತಾರ್ಥದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಜೋಡಿ ಕಳೆದ ಕೆಲವು ದಿನಗಳಿಂದಲೂ ಡೇಟಿಂಗ್ ಮಾಡುತ್ತಿತ್ತು. ಇದಕ್ಕೆ ಸಾಕ್ಷಿಯೆಂಬಂತೆ ಪರಸ್ಪರರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಆಗೆಲ್ಲಾ ಅಭಿಮಾನಿಗಳು ನೀವು ರಿಯಲ್ ಲೈಫ್ ನಲ್ಲೂ ಒಂದಾಗಿ. ನಿಮ್ಮಿಬ್ಬರದು ಸೂಪರ್ ಜೋಡಿ ಎಂದು ಹಾರೈಸುತ್ತಲೇ ಇದ್ದರು.ಇದೀಗ ನಿಶ್ಚಿತಾರ್ಥದ