ಬೆಂಗಳೂರು: ಕಿರುತೆರೆಯಲ್ಲಿ ಖ್ಯಾತರಾಗಿರುವ ನಟ ಚಂದನ್ ಕುಮಾರ್ ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ನಾಯಕರಾಗಿ ಅದೃಷ್ಟ ಪರೀಕ್ಷೆ ಮಾಡಿದ್ದರು. ಇದೀಗ ಹೊಸ ಸುದ್ದಿ ಕೊಡುವ ಸುಳಿವು ನೀಡಿದ್ದಾರೆ. ಚಂದನ್ ರನ್ನು ಇದುವರೆಗೆ ನೀವು ನಾಯಕನಾಗಿ ಮಾತ್ರ ತೆರೆ ಮೇಲೆ ನೋಡಿರುತ್ತೀರಿ. ಆದರೆ ಚಂದನ್ ನಿರ್ದೇಶನದತ್ತ ಹೊರಳುವ ಸೂಚನೆ ನೀಡಿದ್ದಾರೆ. ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರೆ ಎಂಬ ಸುದ್ದಿಯಿದೆ. ಸದ್ಯದಲ್ಲೇ ಇದನ್ನು ಲಾಂಚ್ ಮಾಡಲಿರುವ ಸುಳಿವನ್ನೂ ಸಾಮಾಜಿಕ ಜಾಲತಾಣದ ಮೂಲಕ ನೀಡಿದ್ದಾರೆ. ಕಿರುತೆರೆಯಲ್ಲಿ ಹುಡುಗಿಯರ