ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಚಿರಪರಿಚಿತರಾದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.ಬಿಗ್ ಬಾಸ್ ಮೂಲಕ ಪರಿಚಯವಾದ ಇಬ್ಬರ ಸಂಬಂಧ ಪ್ರೀತಿಯಲ್ಲಿ ಕೊನೆಗೊಂಡಿತ್ತು. ಇವರಿಬ್ಬರ ನಡುವೆ ಸ್ನೆಹಕ್ಕೂ ಮೀರಿ ಸಂಬಂಧವಿದೆ ಎಂದು ಗಾಸಿಪ್ ಹರಿದಾಡುತ್ತಿದ್ದರೂ ಇಬ್ಬರೂ ಬಹಿರಂಗಪಡಿಸಿರಲಿಲ್ಲ.ಆದರೆ ಇತ್ತೀಚೆಗಷ್ಟೇ ಯುವ ದಸರಾ ಕಾರ್ಯಕ್ರಮ ವೇದಿಕೆಯಲ್ಲಿ ಚಂದನ್ ಬಹಿರಂಗವಾಗಿ ನಿವೇದಿತಾಗೆ ಲವ್ ಪ್ರಪೋಸ್ ಮಾಡುವ ಮೂಲಕ ತಮ್ಮ ಸಂಬಂಧವನ್ನು ಜಗಜ್ಜಾಹೀರು ಮಾಡಿದ್ದರು.