ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಕಿರುತೆರೆಯಲ್ಲೂ ಚಿತ್ರೀಕರಣಗಳು ನಡೆಯದೇ ಧಾರವಾಹಿಗಳು, ರಿಯಾಲಿಟಿ ಶೋಗಳು ಅರ್ಧಕ್ಕೇ ಪ್ರಸಾರ ನಿಲ್ಲಿಸಿವೆ. ಆದರೆ ಈ ಸಮಯದಲ್ಲಿ ಹಳೇ ಕಾರ್ಯಕ್ರಮಗಳನ್ನು ಮತ್ತೆ ಮರುಪ್ರಸಾರ ಮಾಡಲು ಟಿವಿ ವಾಹಿನಿಗಳು ನಿರ್ಧರಿಸಿವೆ.ಸ್ಟಾರ್ ಸುವರ್ಣ ವಾಹಿನಿ ಸಂಜೆಯಿಂದ ರಾತ್ರಿವರೆಗೆ ಎಂದಿನ ಧಾರವಾಹಿಗಳ ಪ್ರಸಾರ ಮಾಡಲು ಸಾಧ್ಯವಿಲ್ಲದ ಕಾರಣ ಸಿನಿಮಾಗಳು, ಹಾಟ್ ಸ್ಟಾರ್ ಆಪ್ ನಲ್ಲಿರುವ ವೆಬ್ ಸೀರೀಸ್, ಹಳೆಯ ಧಾರವಾಹಿಗಳನ್ನು ಪ್ರಸಾರ ಮಾಡಲಿವೆ.ಕಲರ್ಸ್ ಕನ್ನಡ, ಕಲರ್ಸ್ ಸೂಪರ್ ವಾಹಿನಿಗಳೂ ಹಳೆಯ ಧಾರವಾಹಿಗಳು,