ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾದ ಟ್ರೈಲರ್ ಇಂದು ರಿಲೀಸ್ ಆಗಿದೆ.ಬಹುಭಾಷೆಗಳಲ್ಲಿ ಬಿಡುಗಡೆಯಾಗಿರುವ ಟ್ರೈಲರ್ ಗೆ ಭರ್ಜರಿ ಪ್ರತಿಕ್ರಿಯೆ ಬಂದಿದೆ. ಕೆಜಿಎಫ್ ಬಳಿಕ ಕನ್ನಡ ಸಿನಿಮಾವೊಂದು ಪರಭಾಷೆಯಲ್ಲೂ ಸದ್ದು ಮಾಡಬಹುದು ಎಂಬು ಭರವಸೆ ಮೂಡಿಸಿದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ.ಧರ್ಮ ಮತ್ತು ಚಾರ್ಲಿಯ ಭಾವನಾತ್ಮಕ ಪಯಣದ ಕತೆ ಹೊಂದಿರುವ ಟ್ರೈಲರ್ ಸ್ವಲ್ಪ ಕಣ್ಣೀರು, ಇನ್ನೊಂದಿಷ್ಟು ಕಚಗುಳಿ ಇಡುವಂತಿದೆ. ಟಾಲಿವುಡ್ ನಟಿ ಸಾಯಿ ಪಲ್ಲವಿ, ಧನುಷ್ ಕೂಡಾ