ವಿಲೋಕ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರ ಚೇಜ್. ಶೀರ್ಷಿಕೆಯಲ್ಲಿಯೇ ಒಂದು ಆವೇಗವನ್ನಿಟ್ಟುಕೊಂಡಿರೋ ಈ ಸಿನಿಮಾ ಥ್ರಿಲ್ಲರ್ ಅಂಶಗಳನ್ನೊಳಗೊಂಡಿದೆ ಎಂಬ ವಿಚಾರ ಇಯಾವತ್ತೋ ಪ್ರೇಕ್ಷಕರಿಗೆ ಸ್ಪಷ್ಟವಾಗಿತ್ತು. ಅಖಂಡ ಎರಡು ವರ್ಷಗಳ ಕಾಲ ರೂಪಿಸಲ್ಪಟ್ಟರೂ ಆರಂಭದಿಂದ ಈ ವರೆಗೂ ಈ ಸಿನಿಮಾದೆಡೆಗಿನ ಕುತೂಹಲ ಜ್ವರದಂತೆಯೇ ಏರಿಕೊಳ್ಳುತ್ತಿದೆ. chase ಇದೀಗ ಬಿಡುಗಡೆಯಾಗಿರೋ ಟೀಸರ್ ಅದನ್ನು ಮತ್ತಷ್ಟು ತೀವ್ರವಾಗಿಸುವಂತೆ ಮೂಡಿ ಬಂದಿದೆ. ಇದನ್ನು ಕಂಡು ಎಲ್ಲ ವರ್ಗದ ಪ್ರೇಕ್ಷಕರೂ ಥ್ರಿಲ್ ಆಗಿದ್ದಾರೆ. ಈ ಮೂಲಕ