ಬೆಂಗಳೂರು: Chef ಚಿದಂಬರನ ನಳಪಾಕ ರೆಡಿಯಾಗಿದೆ. ಆದರೆ ಜನರಿಗೆ ಉಣಬಡಿಸುವ ಮೊದಲು ಒಗ್ಗರಣೆ ಹಾಕಬೇಕಿದೆ. ಇದಕ್ಕೆ ಒಂದಷ್ಟು ಸಮಯ ಹಿಡಿಯಲಿದೆ.ಅನಿರುದ್ಧ್ ಜತ್ಕಾರ್ ನಾಯಕರಾಗಿರುವ ‘ರಾಘು’ ಸಿನಿಮಾ ಖ್ಯಾತಿಯ ನಿರ್ದೇಶಕ ಆನಂದ್ ರಾಜ್ ನಿರ್ದೇಶಿಸಿರುವ Chef ಚಿದಂಬಂರ ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವುದಾಗಿ ಚಿತ್ರತಂಡ ಘೋಷಿಸಿದೆ. ಕೇವಲ 29 ದಿನಗಳಲ್ಲಿ ಶೂಟಿಂಗ್ ಮುಕ್ತಾಯವಾಗಿದೆ. ಮುಂದೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿಯಿವೆ. ಮುಂದಿನ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಸಿನಿಮಾ ಸಸ್ಪೆನ್ಸ್