ಬೆಂಗಳೂರು: ಆ ದಿನಗಳು ಚೇತನ್ ತಮ್ಮ ಸಾಮಾಜಿಕ ಕೆಲಸಗಳು, ವೈಯಕ್ತಿಕ ಜೀವನದಲ್ಲಿ ಮದುವೆ ಇತ್ಯಾದಿಯಲ್ಲಿ ಬ್ಯುಸಸಿಯಾಗಿ ಹೋಗಿದ್ದರು. ಇದೀಗ ಬ್ರೇಕ್ ನ ಬಳಿಕ ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಚೇತನ್ ಅಭಿನಯಿಸಲಿರುವ ಮಾರ್ಗ ಎನ್ನುವ ಹೊಸ ಸಿನಿಮಾಗೆ ನಿನ್ನೆ ಚಾಲನೆ ಸಿಕ್ಕಿದೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.ಮೋಹನ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು ರೇಶ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.