ಚಿರು ಸರ್ಜಾ ಬರ್ತ್ ಡೇಗೆ ಕುಟುಂಬಸ್ಥರಿಂದ ಸ್ವೀಟ್ ಗಿಫ್ಟ್

ಬೆಂಗಳೂರು| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (09:36 IST)
ಬೆಂಗಳೂರು: ಇತ್ತೀಚೆಗಷ್ಟೇ ಅಗಲಿದ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಬರ್ತ್ ಡೇ ಇಂದು. ಅವರ ಬರ್ತ್ ಡೇಗೆ ಅವರ ಕುಟುಂಬಸ್ಥರು ಸ್ವೀಟ್ ಗಿಫ್ಟ್ ನೀಡಿದ್ದಾರೆ.

 
ಚಿರು ಬರ್ತ್ ಡೇ ದಿನವೇ ಅವರ ಅಭಿನಯದ ‘ಶಿವಾರ್ಜುನ’ ಸಿನಿಮಾ ಮರುಬಿಡುಗಡೆಯಾಗುತ್ತಿದೆ. ಇನ್ನು, ರಾಜಮಾರ್ತಾಂಡಡ ಸಿನಿಮಾದ ವಿಡಿಯೋ ಹಾಡು ಬಿಡುಗಡೆಯಾಗುತ್ತಿದೆ. ಇದರ ಜತೆಗೆ ಚಿರು ಕುಟುಂಬಸ್ಥರು ಮೊನ್ನೆಯಷ್ಟೇ ಚಿರು ಪತ್ನಿ ಮೇಘನಾ ಸರ್ಜಾಗೆ ಮಾಡಿದ್ದ ಸೀಮಂತ ಕಾರ್ಯಕ್ರಮದ ವಿಡಿಯೋವೊಂದನ್ನು ಬಿಡುಗಡೆ ಮಾಡಿ ಚಿರು ಬರ್ತ್ ಡೇಯನ್ನು ನೆನಪಿನಲ್ಲುಳಿಯುವಂತೆ ಮಾಡಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಚಿರು ಸ್ಮರಣೆ ಮಾಡಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :