ಚಿರಂಜೀವಿ ಸರ್ಜಾ ಶಿವಾರ್ಜುನ ಥಿಯೇಟರ್ ನಲ್ಲಿ ವೀಕ್ಷಿಸಿದ ತಾಯಿ ಕಣ್ಣೀರು

ಬೆಂಗಳೂರು| Krishnaveni K| Last Modified ಶನಿವಾರ, 17 ಅಕ್ಟೋಬರ್ 2020 (09:30 IST)
ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯಿಸಿ ಬಿಡುಗಡೆಯಾಗಿದ್ದ ಕೊನೆಯ ಸಿನಿಮಾ ಶಿವಾರ್ಜುನ. ಈ ಸಿನಿಮಾ ಈಗ ಲಾಕ್ ಡೌನ್ ಬಳಿಕ ರಿ ರಿಲೀಸ್ ಆಗಿದೆ. ಇಂದು ಚಿರು ಬರ್ತ್ ಡೇ ಇದ್ದು, ಕುಟುಂಬಸ್ಥರು ನಿನ್ನೆ ಶಿವಾರ್ಜುನ ಸಿನಿಮಾವನ್ನು ಥಿಯೇಟರ್ ನಲ್ಲಿ ನೋಡಿ ಖುಷಿಪಟ್ಟಿದ್ದಾರೆ.

 
ಇನ್ನು, ಚಿರು ಸರ್ಜಾ ಪರದೆ ಮೇಲೆ ಬರುತ್ತಿದ್ದಂತೇ ಅವರ ತಾಯಿ ಕಣ್ಣೀರು ಹಾಕಿದ ಘಟನೆ ನಡೆದಿದೆ. ಪ್ರೇಕ್ಷಕರ ಜತೆ ಕುಳಿತು ಮಗನ ಸಿನಿಮಾವನ್ನು ಕಣ‍್ತುಂಬಿಕೊಂಡ ಸರ್ಜಾ ಕುಟುಂಬಸ್ಥರು ಭಾವುಕರಾಗಿದ್ದಾರೆ. ಇದಲ್ಲದೆ, ಇಂದು ಸಹೋದರ ಧ್ರುವ ಸರ್ಜಾ ಥಿಯೇಟರ್ ನಲ್ಲಿ ಚಿತ್ರ ವೀಕ್ಷಣೆ ಮಾಡಲಿದ್ದಾರೆ. ಹಿಂದೆ ಶಿವಾರ್ಜುನ ಸಿನಿಮಾ ಫಸ್ಟ್ ಡೇ ಫಸ್ಟ್ ಶೋ ನೋಡಿದ್ದ ಧ್ರುವ ಈಗ ಅಣ್ಣನ ಬರ್ತ್ ಡೇ ದಿನ ಅಭಿಮಾನಿಗಳೊಂದಿಗೆ ಸಿನಿಮಾ ವೀಕ್ಷಿಸಲಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :