ಬೆಂಗಳೂರು: ಬ್ರೈನ್ ಸ್ಟ್ರೋಕ್ ಮತ್ತು ಹೃದಯಾಘಾತದಿಂದಾಗಿ ಹಠಾತ್ ನಿಧನರಾದ ನಟ ಚಿರಂಜೀವಿ ಸರ್ಜಾ ನಿಧನಕ್ಕೆ ಸ್ಯಾಂಡಲ್ ವುಡ್ ಆಘಾತದ ಜತೆ ಕಂಬನಿ ಮಿಡಿದಿದೆ. ನಟ ದರ್ಶನ್ ತೂಗುದೀಪ, ಶಿವರಾಜ ಕುಮಾರ್, ರಮೇಶ್ ಅರವಿಂದ್, ರಕ್ಷಿತಾ ಪ್ರೇಮ್, ಅನಿರುದ್ಧ್ , ರಿಷಬ್ ಶೆಟ್ಟಿ, ಜಗ್ಗೇಶ್ ಸೇರಿದಂತೆ ಹೆಚ್ಚಿನ ಕಲಾವಿದರು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.ಚಿರು ಅಕಾಲಿಕ ನಿಧನದಿಂದ ಮನಸ್ಸಿಗೆ ಹೇಳಲಾಗದಷ್ಟು ಆಘಾತವಾಗಿದೆ ಎಂದು ದರ್ಶನ್ ಸಂತಾಪ ವ್ಯಕ್ತಪಡಿಸಿದರೆ, ಜಗ್ಗೇಶ್