ಚಿರಂಜೀವಿ ಸರ್ಜಾ ಅಭಿನಯದ ಖಾಕಿ ಟೀಸರ್ ಇಂದು

ಬೆಂಗಳೂರು| Krishnaveni K| Last Modified ಬುಧವಾರ, 30 ಅಕ್ಟೋಬರ್ 2019 (09:14 IST)
ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯದ ಖಾಕಿ ಸಿನಿಮಾ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ದೀಪಾವಳಿ ಹಬ್ಬಕ್ಕೆ ಇದು ಚಿರು ಅಭಿಮಾನಿಗಳಿಗೆ ಹಬ್ಬವಾಗಲಿದೆ.

 
ಖಾಕಿ ಎಂಬ ಹೆಸರೇ ಹೇಳುವಂತೆ ಇಲ್ಲಿ ಚಿರು ಸರ್ಜಾ ಖಡಕ್, ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ಫೈಟ್ ಗೆ ಏನೂ ಕೊರತೆಯಿರದು ಎನ್ನುವುದು ಪ್ರೇಕ್ಷಕರ ನಿರೀಕ್ಷೆ. ಅದಕ್ಕೆ ಇಂದು ಉತ್ತರ ಸಿಗಲಿದೆ. ನವೀನ್ ರೆಡ್ಡಿ ಈ ಚಿತ್ರದ ನಿರ್ದೇಶಕರು.
 
ಈ ಸಿನಿಮಾ ಜತೆಗೆ ಚಿರು ಸರ್ಜಾ ಅಭಿನಯದ ರಾಜಮಾರ್ತಾಂಡ ಮತ್ತು ಶಿವಾರ್ಜುನ ಕೂಡಾ ತೆರೆಗೆ ಬರಲು ಕಾಯುತ್ತಿದೆ. ಹೀಗಾಗಿ ಈ ವರ್ಷ ಚಿರು ಸರ್ಜಾ ಪಾಲಿಗೆ ಬ್ಯುಸಿ ವರ್ಷವಾಗಲಿದೆ.
ಇದರಲ್ಲಿ ಇನ್ನಷ್ಟು ಓದಿ :