ಡಿ ಬಾಸ್ ದರ್ಶನ್ ಗೆ ಚಿರಂಜೀವಿ ಸರ್ಜಾ ದಂಪತಿ ಕೊಟ್ಟ ಆ ಗಿಫ್ಟ್ ಏನು ಗೊತ್ತಾ?!

ಬೆಂಗಳೂರು, ಸೋಮವಾರ, 15 ಜುಲೈ 2019 (09:51 IST)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರಿಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದೇ ರೀತಿ ನಟ ಚಿರಂಜೀವಿ ಸರ್ಜಾ ಕೂಡಾ ಶ್ವಾನ ಪ್ರಿಯರು.


 
ಚಿರು ಸರ್ಜಾ ಮತ್ತು ಪತ್ನಿ ಮೇಘನಾ ರಾಜ್ ಆಗಾಗ ತಮ್ಮ ಮುದ್ದಿನ ಶ್ವಾನಗಳ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಲೇ ಇರುತ್ತಾರೆ. ಇದೀಗ ಶ್ವಾನ ಪ್ರಿಯ ದಂಪತಿ ತಮ್ಮ ಮನೆಯ ಮುದ್ದಿನ ನಾಯಿ ಮರಿಯೊಂದನ್ನು ಡಿ ಬಾಸ್ ದರ್ಶನ್ ಗೆ ಗಿಫ್ಟ್ ಆಗಿ ನೀಡಿದ್ದಾರೆ.
 
ನಮ್ಮ ಮನೆಯ ಈ ಕ್ಯೂಟ್ ಪಪ್ಪಿ ಇನ್ನು ನಮ್ಮದೇ ಕುಟುಂಬದ ಬೇರೊಬ್ಬ ಸದಸ್ಯರ ಮನೆಗೆ ಶಿಫ್ಟ್ ಆಗಲಿದೆ ಎಂದು ಮೇಘನಾ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಅದರಂತೆ ಇದೀಗ ಆ ಕುಟುಂಬ ಸದಸ್ಯ ಬೇರೆ ಯಾರೂ ಅಲ್ಲ, ಡಿ ಬಾಸ್ ದರ್ಶನ್ ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ, ಚಿರು ಸರ್ಜಾ ತಮ್ಮ ಮುದ್ದಿನ ನಾಯಿ ಮರಿಯನ್ನು ದರ್ಶನ್ ಗೆ ಉಡುಗೊರೆಯಾಗಿ ನೀಡುತ್ತಿರುವ ಫೋಟೋವನ್ನೂ ಪ್ರಕಟಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಡಿ ಬಾಸ್ ದರ್ಶನ್ ಅಭಿನಯದ ಯಜಮಾನ ಕಿರುತೆರೆಯಲ್ಲಿ!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಸದ್ಯದಲ್ಲೇ ಕಿರುತೆರೆಯಲ್ಲಿ ...

news

ಕನ್ನಡ ಪ್ರೇಕ್ಷಕರಿಂದ ಮತ್ತೆ ಟ್ರೋಲ್ ಗಳಗಾದ ರಶ್ಮಿಕಾ ಮಂದಣ್ಣ

ಬೆಂಗಳೂರು: ರಕ್ಷಿತ್ ಶೆಟ್ಟಿ ಜತೆಗಿನ ಎಂಗೇಜ್ ಮೆಂಟ್ ಮುರಿದುಕೊಂಡು ತೆಲುಗಿನಲ್ಲಿ ಬ್ಯುಸಿಯಾದ ಮೇಲೆ ...

news

ಡಿಯರ್ ಕಾಮ್ರೇಡ್ ಕನ್ನಡ ಅವತರಣಿಕೆಯಲ್ಲಿ ವಿಜಯ್ ದೇವರಕೊಂಡ ಧ್ವನಿ ಬಗ್ಗೆ ಅಪಸ್ವರವೆತ್ತಿದ ಕನ್ನಡಿಗರು

ಬೆಂಗಳೂರು: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಭಿನಯದ ಡಿಯರ್ ಕಾಮ್ರೇಡ್ ಸಿನಿಮಾ ತೆಲುಗು ...

news

ಲಂಡನ್ ನಲ್ಲಿ ಶಿವರಾಜ್ ಕುಮಾರ್ ಭೇಟಿಯಾದ ಕ್ರಿಕೆಟಿಗ ಅನಿಲ್ ಕುಂಬ್ಳೆ

ಲಂಡನ್: ಭುಜದ ಶಸ್ತ್ರಚಿಕಿತ್ಸೆಗಾಗಿ ಲಂಡನ್ ಗೆ ತೆರಳಿರುವ ನಟ ಶಿವರಾಜ್ ಕುಮಾರ್ ಅಲ್ಲಿ ಕನ್ನಡಿಗ ಮಾಜಿ ...