ಬೆಂಗಳೂರು: ಲಾಕ್ ಡೌನ್ ಎಂಬುದು ಎಲ್ಲಾ ಉದ್ಯಮಗಳ ಮೇಲೂ ಪರಿಣಾಮ ಬೀರಿದೆ. ಇದಕ್ಕೆ ಸಿನಿ ಉದ್ಯಮವೂ ಹೊರತಲ್ಲ. ಕಲೆಯನ್ನೇ ನೆಚ್ಚಿ ಬದುಕು ಕಟ್ಟಿಕೊಂಡಿದ್ದ ಅನೇಕರು ಇಂದು ಭವಿಷ್ಯದ ಬಗ್ಗೆ ಅಭದ್ರತೆಯ ಭಯದಲ್ಲಿ ಬದುಕು ನಡೆಸುತ್ತಿದ್ದಾರೆ.ಲಾಕ್ ಡೌನ್ ನಿಂದಾಗಿ ಅನೇಕ ಚಿತ್ರಗಳ ಚಿತ್ರೀಕರಣ ಅರ್ಧಕ್ಕೇ ನಿಂತಿದೆ. ಇನ್ನು ಕೆಲವು ಸಿನಿಮಾಗಳು ಬಿಡುಗಡೆಗೆ ಕಾದು ಕುಳಿತಿವೆ. ಚಿತ್ರಮಂದಿರ ತೆರೆಯಲು ಸರ್ಕಾರ ಒಪ್ಪಿಗೆ ನೀಡಿದ ತಕ್ಷಣ ಹಲವು ಸಿನಿಮಾಗಳು ಏಕಕಾಲಕ್ಕೆ ಬಿಡುಗಡೆಯಾದರೆ ಯಾವ ಸಿನಿಮಾಗಳೂ