ಬೆಂಗಳೂರು: ರಾಜಕಾರಣಿಗಳೂ ಬಿಡುವಿದ್ದಾಗ ಟಿವಿ, ಸಿನಿಮಾ ನೋಡುವುದು ಸಾಮಾನ್ಯ. ಇದಕ್ಕೆ ಸಿಎಂ ಯಡಿಯೂರಪ್ಪ ಕೂಡಾ ಹೊರತಲ್ಲ. ಸಿಎಂ ತಪ್ಪದೇ ಪ್ರತಿನಿತ್ಯ ಧಾರವಾಹಿಯೊಂದನ್ನು ವೀಕ್ಷಿಸುತ್ತಾರಂತೆ. ಆ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡಬ್ಬಿಂಗ್ ಧಾರವಾಹಿ ಮಹಾಭಾರತವನ್ನು ಸಿಎಂ ತಪ್ಪದೇ ನೋಡುತ್ತಾರಂತೆ.ವಿಪರ್ಯಾಸವೆಂದರೆ ಕನ್ನಡ ಕಲಾವಿದರು ಇತ್ತೀಚೆಗೆ ಡಬ್ಬಿಂಗ್ ಧಾರವಾಹಿಯನ್ನು ನಿಲ್ಲಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಸ್ವತಃ ಸಿಎಂ ಡಬ್ಬಿಂಗ್ ಧಾರವಾಹಿಯೊಂದರ ಅಭಿಮಾನಿ ಎಂಬುದು