ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಇನ್ನೇನು ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಏಳನೇ ಆವೃತ್ತಿ ಪ್ರಸಾರವಾಗಲಿದೆ. ಇದಕ್ಕಾಗಿ ವಾಹಿನಿ ಇದೀಗ ಸಮಯ ಹೊಂದಿಸಿಕೊಳ್ಳಲು ಎರಡು ಧಾರವಾಹಿಗಳಿಗೆ ಕತ್ತರಿ ಹಾಕುತ್ತಿದೆ.ರಾಧಾರಮಣ ಧಾರವಾಹಿ ಮುಗಿಸುವ ಸುದ್ದಿ ಈಗಾಗಲೇ ಹೊರ ಹಾಕಿರುವ ವಾಹಿನಿ ಇದೀಗ ಮತ್ತೊಂದು ಧಾರವಾಹಿಗೆ ಕತ್ತರಿ ಪ್ರಯೋಗ ನಡೆಸುವ ಸಿದ್ಧತೆ ನಡೆಸಿದೆ. ಕೆಲವೇ ಸಮಯದ ಮೊದಲು ಆರಂಭವಾಗಿದ್ದ ರಂಗನಾಯಕಿ ಧಾರವಾಹಿಯೂ ಮುಕ್ತಾಯವಾಗುತ್ತಿದೆ.ಬಿಗ್ ಬಾಸ್ ಗಾಗಿ ಈ ಎರಡು ಧಾರವಾಹಿಗೆ ಕತ್ತರಿ