ಬಾಗಲಕೋಟೆ : ಕನ್ನಡ ಚಿತ್ರರಂಗದಲ್ಲಿ ನಟಿಮಣಿಗಳಿಗೆ ಹೊಸ ಅವಕಾಶ ಸಿಗಬೇಕು ಅಂದ್ರೆ ಮಂಚ ಏರಬೇಕೆನ್ನುವ ವಾತಾವರಣ ಇದ್ದೇ ಇದೆ. ಅದು ಇಲ್ಲ ಅಂತ ಹೇಳುವ ಧೈರ್ಯ ನನಗಿಲ್ಲ ಎಂದು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ ಮಂಡ್ಯ ರಮೇಶ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗ ಸೇರಿದಂತೆ ತೆಲುಗು, ತಮಿಳು ಸೇರಿದಂತೆ ಭಾರತೀಯ ಚಿತ್ರರಂಗದ ಅನೇಕ ಕಡೆ