ಬೆಂಗಳೂರು: ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದೆ ನಯನಾ ಹಣಕಾಸಿನ ವಿಚಾರದಲ್ಲಿ ಕಿತ್ತಾಟವಾಡಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮತ್ತೊಬ್ಬ ಕಲಾವಿದ ಸೋಮಶೇಖರ್ ಎಂಬವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.ಕಾಮಿಡಿ ಕಿಲಾಡಿಗಳು ಶೋನಿಂದ ಬಂದಿದ್ದ 3 ಲಕ್ಷ ರೂ. ಬಹುಮಾನ ಹಣ ಹಂಚಿಕೆ ವಿಚಾರದಲ್ಲಿ ಸೀನಿಯರ್ ಗಳಿಗೂ ಪಾಲು ಕೊಡಬೇಕು ಎಂದು ನಯನಾ ಪೊಲೀಸ್ ಠಾಣೆಯಲ್ಲೇ ಕುಳಿತು ವಾಯ್ಸ್ ಮೆಸೇಜ್ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಾಜರಾಜೇಶ್ವರಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಸೋಮಶೇಖರ್