ಮುಂಬೈ : ಮದ್ಯಪಾನ ಮಾಡಿ ವಾಹನ ಚಾಲಾಯಿಸಿದ ಬಾಲಿವುಡ್ ಹಿರಿಯ ನಟ ದಲೀಪ್ ತಾಹಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ನಟ ದಲೀಪ್ ತಾಹಿಲ್ ಇಲ್ಲಿನ ಖಾರ್ ಪ್ರದೇಶಲ್ಲಿ ಕುಡಿದ ಮತ್ತಿನಲ್ಲಿ ವಾಹನ ಚಾಲನೆ ಮಾಡಿದಲ್ಲದೇ ಆಟೋವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಆ ವೇಳೆ ಆಟೋದಲ್ಲಿದ್ದ ಜೆನಿತಾ ಗಾಂಧಿ ಹಾಗೂ ಗೌರವ್ ಎಂಬುವವರು ಈ ಬಗ್ಗೆ ದಲೀಪ್ ಅವರನ್ನು ಪ್ರಶ್ನಿಸಿದಾಗ ಕುಡಿದ ಅಮಲಿನಲ್ಲಿದ್ದ ತಾಹಿಲ್, ಇಬ್ಬರ ಜೊತೆ ವಾಗ್ವಾದಕ್ಕಿಳಿದು ಗೌರವ್ ಎಂಬುವವರನ್ನು