ಬೆಂಗಳೂರು: ತಮ್ಮ ಕ್ಷೇತ್ರದಲ್ಲಿ ವರನಟ ಡಾ. ರಾಜಕುಮಾರ್ ಪ್ರತಿಮೆ ನಿರ್ಮಿಸುವ ವಿಚಾರವಾಗಿ ಮಾತನಾಡುವಾಗ ಕನ್ನಡದ ಕಣ್ಮಣಿ ಬಗ್ಗೆ ಉಡಾಫೆಯಿಂದ ಮಾತನಾಡಿ ವಿವಾದ ಸೃಷ್ಟಿಸಿಕೊಂಡ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಕ್ಷಮೆ ಯಾಚಿಸಿದ್ದಾರೆ. ಡಾ. ರಾಜ್ ಪ್ರತಿಮೆ ಸ್ಥಾಪನೆ ಮಾಡುವ ವಿಚಾರದ ಬಗ್ಗೆ ತಮ್ಮ ಜೊತೆಗಿದ್ದವರೊಂದಿಗೆ ಬೇಜವಾಬ್ಧಾರಿಯುತವಾಗಿ ಮಾತನಾಡುತ್ತಿದ್ದ ಹ್ಯಾರಿಸ್ ವಿಡಿಯೋ ವೈರಲ್ ಆಗಿತ್ತು. ಪ್ರತಿಮೆ ಸ್ಥಾಪನೆಗೆ ಅಲ್ಲಿದ್ದವರು ಪ್ಲ್ಯಾನ್ ಹೇಳುತ್ತಿದ್ದರೆ, ಅದರ ಬಗ್ಗೆ ಉಡಾಫೆಯಾಗಿ ಪ್ರತಿಕ್ರಿಯಿಸುತ್ತಿದ್ದರು. ಇದು ಡಾ.ರಾಜ್