ಬೆಂಗಳೂರು : ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರ ಜೊತೆ ಕಾಂಗ್ರೆಸ್ ಶಾಸಕರೊಬ್ಬರ ಪುತ್ರಿ ಪರಾರಿಯಾಗಿರುವ ಮಾಹಿತಿಯೊಂದು ತಿಳಿದುಬಂದಿದೆ. ಮಾಯಕೊಂಡ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ಎಸ್. ನಾಯ್ಕ್ ಹಾಗೂ ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಗೌಡ ಅವರು ಪರಸ್ಪರ ಪ್ರೀತಿಸುತ್ತಿದ್ದು, ಇದಕ್ಕೆ ಮನೆಯವರು ಒಪ್ಪಿಗೆ ನೀಡದ ಕಾರಣ ಬುಧವಾರ ಬೆಳಿಗ್ಗೆ ಇಬ್ಬರು ಪರಾರಿಯಾಗಿದ್ದಾರೆ. ಈ ಪ್ರೇಮಿಗಳು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮದುವೆಯಾಗುವ ನಿರ್ಧಾರ ಮಾಡಿರುವುದಾಗಿ