ಹೈದರಾಬಾದ್ : ಟಾಲಿವುಡ್ ನಟ ರವಿತೇಜ ಅವರ ‘ಕ್ರ್ಯಾಕ್’ ಚಿತ್ರ ಬಿಡುಗಡೆಯಾಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಆದರೆ ಈ ನಡುವೆ ಇದೀಗ ಕ್ರ್ಯಾಕ್ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರ ನಡುವೆ ಸಂಭಾವನೆ ವಿಚಾರದಲ್ಲಿ ವಿವಾದ ಏರ್ಪಟ್ಟಿದೆ ಎನ್ನಲಾಗಿದೆ. ಕ್ರ್ಯಾಕ್ ಚಿತ್ರದ ನಿರ್ಮಾಪಕ ಟಾಗೋರ್ ಮಧು ಅವರು ತಮಗೆ ಬಾಕಿ ಇರುವ 12 ಲಕ್ಷ ರೂ ಸಂಭಾವನೆಯನ್ನು ನೀಡಿಲ್ಲ ಎಂದು ಚಿತ್ರದ ನಿರ್ದೇಶಕ ಗೋಪಿ ಚಂದ್ ತೆಲುಗು ಚಲನಚಿತ್ರ ನಿರ್ದೇಶಕರ ಸಂಘಕ್ಕೆ