ಬೆಂಗಳೂರು: ಕೊರೋನಾ ನಿರ್ಬಂಧಿತ ನಿಯಮಗಳಿಂದಾಗಿ ಹೊಡೆತ ಬೀಳುತ್ತಿರುವುದು ಸಣ್ಣ ಬಜೆಟ್ ನ ಹೊಸಬರ ಸಿನಿಮಾಗಳ ಮೇಲೆ.ಸ್ಟಾರ್ ಸಿನಿಮಾಗಳು ಬಿಡುಗಡೆ ದಿನಾಂಕ ಮುಂದೂಡಿಕೆ ಮಾಡಿ ಕೊರೋನಾ ನಿಯಂತ್ರಣಕ್ಕೆ ಬಂದ ಮೇಲೆ ಥಿಯೇಟರ್ ನಲ್ಲೇ ಬಿಡುಗಡೆ ಮಾಡಿ ಲಾಭ ಮಾಡಿಕೊಳ್ಳುತ್ತವೆ. ಇಲ್ಲದೇ ಹೋದರೆ ಒಟಿಟಿಗಳೂ ಸ್ಟಾರ್ ಸಿನಿಮಾಗಳನ್ನು ದೊಡ್ಡ ಮೊತ್ತ ಕೊಟ್ಟು ಖರೀದಿ ಮಾಡುತ್ತವೆ.ಆದರೆ ಸಣ್ಣ ಬಜೆಟ್ ನ ಹೊಸಬರ ಸಿನಿಮಾಗಳನ್ನು ಒಟಿಟಿಯಲ್ಲೂ ಕೊಳ್ಳಲು ಹಿಂದೆ-ಮುಂದೆ ನೋಡುತ್ತಾರೆ. ಇನ್ನು, ಥಿಯೇಟರ್ ಗಳೂ ಸಂಪೂರ್ಣ