ಬೆಂಗಳೂರು: ಕೊರೋನಾವೈರಸ್ ಭೀತಿಯಿಂದಾಗಿ ಧಾರವಾಹಿಗಳೂ ಚಿತ್ರೀಕರಣ ಬಂದ್ ಮಾಡುತ್ತವೆ. ಇದರಿಂದಾಗಿ ಕೆಲವು ದಿನ ನಿಮಗೆ ನಿಮ್ಮ ನೆಚ್ಚಿನ ಧಾರವಾಹಿಗಳು ನೋಡಲು ಸಾಧ್ಯವಾಗದು ಎಂಬಿತ್ಯಾದಿ ಸುದ್ದಿಗಳು ಓಡಾಡುತ್ತಿವೆ.ಆದರೆ ನಿಜಾಂಶ ಏನು ಗೊತ್ತಾ? ಕನ್ನಡದ ಯಾವುದೇ ಧಾರವಾಹಿ ಚಿತ್ರೀಕರಣ ಸ್ಥಗಿತಗೊಳಿಸಲು ಸದ್ಯಕ್ಕೆ ಯಾವುದೇ ಸೂಚನೆ ಬಂದಿಲ್ಲ. ಆದರೆ ಯಾವಾಗ ಬೇಕಾದರೂ ಇಂತಹದ್ದೊಂದು ಆದೇಶ ಬಂದರೂ ಬರಬಹುದು. ಹೀಗೊಂದು ಆತಂಕದಲ್ಲೇ ಎಲ್ಲಾ ಧಾರವಾಹಿ ತಂಡಗಳೂ ಇವೆ. ಇದಕ್ಕಾಗಿ ಎಪಿಸೋಡ್ ಗಳನ್ನು ಬ್ಯಾಂಕಿಂಗ್ ಮಾಡುವ ಕೆಲಸ