ಕೊರೋನಾವೈರಸ್ ಸಂದರ್ಭದಲ್ಲಿ ನಟಿ ಹರಿಪ್ರಿಯಾ ಸಮಾಜ ಸೇವೆ

ಬೆಂಗಳೂರು| Krishnaveni K| Last Updated: ಸೋಮವಾರ, 23 ಮಾರ್ಚ್ 2020 (11:23 IST)
ಬೆಂಗಳೂರು: ಕೊರೋನಾವೈರಸ್ ಹರಡುವಿಕೆ ತಡೆಗಟ್ಟಲು ಚಿತ್ರರಂಗ ಸ್ತಬ್ಧವಾಗಿದೆ. ಈ ನಡುವೆ ನಟಿ ಹರಿಪ್ರಿಯಾ ಮನೆಯಲ್ಲೇ ಕೂತುಕೊಂಡೇ ಸಮಾಜ ಸೇವೆಗೆ ಕರೆ ನೀಡಿದ್ದಾರೆ.

 
ಕೊರೋನಾ ಬಗ್ಗೆ ಸುಶಿಕ್ಷಿತರಿಗೆ ಮಾಹಿತಿ ಸಿಗುತ್ತದೆ ಹಾಗೂ ತಕ್ಕ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳುತ್ತಿದ್ದಾರೆ. ಆದರೆ ತೊಂದರೆಯಾಗುತ್ತಿರುವುದು ಬಡವರ್ಗದವರಿಗೆ, ದಿನಗೂಲಿ ಕೆಲಸ ಮಾಡುವವರಿಗೆ.
 
ಅವರಿಗೆ ಟಿವಿ, ಪೇಪರ್ ಲಭ್ಯವಿಲ್ಲದೇ ಮಾಹಿತಿ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ನಿಮ್ಮ ಸುತ್ತಮುತ್ತ ಇರುವ ಇಂತಹ ಕುಟುಂಬಗಳಿಗೆ ಕೈಲಾದಷ್ಟು ದಿನಸಿ ಸಾಮಾನು, ಸ್ಯಾನಿಟೈಸರ್ ನೀಡಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸಿ. ನಾನೂ ನನ್ನ ಕೈಲಾದಷ್ಟು ಮಾಡುತ್ತಿದ್ದೇನೆ ಎಂದು ಹರಿಪ್ರಿಯಾ ಹೇಳಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :