ಕಾರ್ಪೊರೇಟ್ ಜಗತ್ತಿನಿಂದ ಕನ್ನಡ ಚಿತ್ರರಂಗದ ವಿವಿಧ ವಿಭಾಗಗಳಿಗೆ ಪ್ರತಿಭಾವಂತರು ಆಗಮಿಸೋದು ಹೊಸಾ ಬೆಳವಣಿಗೆಯೇನಲ್ಲ. ಹಾಗೆ ಬಂದವರೆಲ್ಲ ಹೊಸತನದ ಕಂಪನ್ನು ಹೊತ್ತು ತರುತ್ತಾರೆಂಬ ನಂಬಿಕೆಯೂ ಸಹ ಈ ವರೆಗೂ ಸುಳ್ಳಾಗಿಲ್ಲ. ಇದನ್ನು ಮತ್ತಷ್ಟು ನಿಜವಾಗಿಸುವ ಹುಮ್ಮಸ್ಸಿನೊಂದಿಗೆ ಮತ್ತೊಂದು ತಂಡವೀಗ ಮೋಕ್ಷ ಎಂಬ ಚಿತ್ರದೊಂದಿಗೆ ಆಗಮಿಸಿದೆ. ಚಿತ್ರೀಕರಣವನ್ನೆಲ್ಲ ಮುಗಿಸಿಕೊಂಡು ಚಿತ್ರಮಂದಿರಗಳತ್ತ ಮುಖಮಾಡಿರುವ ಮೋಕ್ಷದ ಟೀಸರ್ ಇದೇ ತಿಂಗಳ 24ರಂದು ಬಿಡುಗಡೆಯಾಗಲಿದೆ. moksha ಬಹುತೇಕ ಹೊಸಬರೇ ತುಂಬಿಕೊಂಡಿರೋ ಮೋಕ್ಷ ಚಿತ್ರವನ್ನು ಸಮರ್ಥ್ ನಾಯಕ್ ನಿರ್ದೇಶನ