ತಮಿಳು ಸಿನಿಮಾ ನಟ ಧನುಷ್ಗೆ ಸಂಬಂಧಿಸಿದಂತೆ ಹುಟ್ಟುಮಚ್ಚೆಗಳ ವಿವರಗಳುಳ್ಳ ವರದಿಯನ್ನು ಸಲ್ಲಿಸಬೇಕೆಂದು ಮಧುರೈ ಹೈಕೋರ್ಟ್ ವಿಭಾಗೀಯ ಪೀಠ ಆದೇಶಿಸಿದೆ. ಧನುಷ್ ತನ್ನ ಮಗ ಎಂದು ಮಧುರೈ ಮೂಲದ ದಂಪತಿಗಳು ಪ್ರಕರಣ ದಾಖಲಿಸಿದ್ದ ಕಾರಣ ಈ ಹಿನ್ನೆಲೆಯಲ್ಲಿ ಕೋರ್ಟ್ ಆದೇಶಿಸಿದೆ. ಮಧುರೈ ಸಮೀಪ ಮೇಲೂರಿನಲ್ಲಿ ವಾಸಿಸುತ್ತಿರುವ ಕದಿರೇಷನ್, ಮೀನಾಕ್ಷಿ ದಂಪತಿಗಳು ಧನುಷ್ ತನ್ನ ಪುತ್ರನೆಂದೂ, ಈಗ ಜೀವನ ನಡೆಸುವುದು ಕಷ್ಟವಾಗಿರುವ ಕಾರಣ ತಿಂಗಳಿಗೆ ಸರಿಹೊಂದುವಷ್ಟು ಆರ್ಥಿಕ ಸಹಾಯ ಮಾಡಬೇಕೆಂದು ಆದೇಶಿಸಬೇಕೆಂದು