ಆ ದೃಶ್ಯ ರಿಲೀಸ್ ಜತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಕೊಟ್ಟ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು, ಶುಕ್ರವಾರ, 8 ನವೆಂಬರ್ 2019 (09:10 IST)

ಬೆಂಗಳೂರು: ದೃಶ್ಯ ಎನ್ನುವ ಮಲಯಾಳಂ ಸಿನಿಮಾದ ರಿಮೇಕ್ ಕ್ರೇಜಿಸ್ಟಾರ್ ರವಿಚಂದ್ರನ್ ಗೆ ಬ್ರೇಕ್ ಕೊಟ್ಟಿತ್ತು. ಈಗ ಆ ದೃಶ್ಯ ಎನ್ನುವ ಹೊಸ ಸಿನಿಮಾದೊಂದಿಗೆ ರವಿಚಂದ್ರನ್ ಬಂದಿದ್ದಾರೆ.


 
ಕೆ. ಮಂಜು ನಿರ್ಮಾಣದ ಆ ದೃಶ್ಯ ಸಿನಿಮಾ ಇಂದಿನಿಂದ ತೆರೆಗೆ ಬರುತ್ತಿದೆ. ಇದೊಂದು ಹಾರರ್, ಥ್ರಿಲ್ಲರ್ ಸಿನಿಮಾವಾಗಿದ್ದು, ರವಿಚಂದ್ರನ್ ಒಬ್ಬ ತನಿಖಾಧಿಕಾರಿಯ ಪಾತ್ರ ಮಾಡುತ್ತಿದ್ದಾರೆ.
 
ಅದರ ನಡುವೆಯೇ ರವಿಚಂದ್ರನ್ ಕಡೆಯಿಂದ ಮತ್ತೊಂದು ಸುದ್ದಿ ಬಂದಿದೆ. ಸದ್ಯದಲ್ಲೇ ಕ್ರೇಜಿಸ್ಟಾರ್ ತಮ್ಮ ಪುತ್ರ ಮನೋರಂಜನ್ ಗಾಗಿ ಸಿನಿಮಾವೊಂದನ್ನು ನಿರ್ದೇಶಿಸಲಿದ್ದಾರಂತೆ. ವಿಶೇಷವೆಂದರೆ ಇದೊಂದು ಸಂಗೀತಮಯ ಸಿನಿಮಾವಾಗಲಿದ್ದು, ಕ್ರೇಜಿಸ್ಟಾರ್ ನ ಪ್ರೇಮಲೋಕ ಸಿನಿಮಾವನ್ನು ನೆನಪಿಸಲಿದೆ ಎನ್ನಲಾಗಿದೆ. ಈ ಸಿನಿಮಾಗೆ ಸ್ಕ್ರಿಪ್ಟ್ ಬರೆದಿಟ್ಟುಕೊಂಡಿರುವ ರವಿಚಂದ್ರನ್ ಸದ್ಯದಲ್ಲೇ ಸಿನಿಮಾಗೆ ಚಾಲನೆ ನೀಡಲಿದ್ದಾರಂತೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮತ್ತೊಂದು ಧಾರವಾಹಿ ನಿರ್ಮಾಣಕ್ಕೆ ಮುಂದಾದ ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ರಾಘವೇಂದ್ರ ರಾಜ್ ಕುಮಾರ್ ಸಿನಿಮಾ ನಿರ್ಮಾಣದಿಂದ, ಧಾರವಾಹಿ ನಿರ್ಮಾಣಕ್ಕೆ ಕಾಲಿಟ್ಟಿದ್ದರು. ...

news

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಡೆಯನ ಹಾಡು ಇಂದು ಬಿಡುಗಡೆ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ಬಗ್ಗೆ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ...

news

ಅಂದು ವಿಜಯ್ ಜತೆ ಲಿಪ್ ಲಾಕ್, ಇಂದು ನಿತಿನ್ ಜತೆ ರಶ್ಮಿಕಾ ಸೊಂಟ ದರ್ಶನ!

ಹೈದರಾಬಾದ್: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಗೀತಾ ಗೋವಿಂದಂ, ಡಿಯರ್ ಕಾಮ್ರೇಡ್ ...

news

ರಾಧಿಕಾ ಕುಮಾರಸ್ವಾಮಿ ಸಿನಿಮಾಗೆ ನಟ ದರ್ಶನ್ ಸಾಥ್

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ನಿರ್ಮಿಸಿ, ಅಭಿನಯಿಸಿರುವ ದಮಯಂತಿ ಸಿನಿಮಾದ ಪೋಸ್ಟರ್ ಈಗಾಗಲೇ ...