ಮಿನಿಸ್ಟರ್ ಸಿಟಿ ರವಿ ಈಗ ಆಕ್ಟರ್! ನಟ ಜೆಕೆ ಜತೆ ಆಲ್ಬಮ್ ಹಾಡಿನಲ್ಲಿ ಸಚಿವರು!

ಬೆಂಗಳೂರು| Krishnaveni K| Last Modified ಬುಧವಾರ, 30 ಅಕ್ಟೋಬರ್ 2019 (09:23 IST)
ಬೆಂಗಳೂರು: ಬಿಜೆಪಿ ನಾಯಕ, ಸಚಿವ ಸಿಟಿ ರವಿ ಕನ್ನಡದ ಕುರಿತಾದ ಆಲ್ಬಮ್ ಹಾಡೊಂದರಲ್ಲಿ ಅಭಿನಯಿಸಿದ್ದಾರೆ. ಈ ಮೂಲಕ ಸಚಿವರು  ತಮ್ಮ ಇನ್ನೊಂದು ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ.

 
ನಟ ಜೆಕೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಬೆಳೆಸೋಣ ಕನ್ನಡ ಎಂಬ ಕನ್ನಡದ ಕುರಿತಾದ ಆಲ್ಬಮ್ ಹಾಡು ನವಂಬರ್ 1 ರಾಜ್ಯೋತ್ಸವದಂದು ಬಿಡುಗಡೆಯಾಗುತ್ತಿದೆ. ಈ ಆಲ್ಬಮ್ ನಲ್ಲಿ ನಟ ಜೆಕೆ ಜತೆ ಸಚಿವ ಸಿಟಿ ರವಿ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಇವರ ಜತೆಗೆ ಪ್ರಶಾಂತ್ ಸಂಬರ್ಗಿ, ಕೋಮಲ್ ಕುಮಾರ್, ಧರ್ಮ ಕೀರ್ತಿ ರಾಜ್ ಕೂಡಾ ಇದ್ದಾರೆ.
 
ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಈ ಆಲ್ಬಮ್ ಹಾಡನ್ನು ಬರೆದು, ಸಂಗೀತ ಸಂಯೋಜಿಸಿ ಹಾಡಿದ್ದಾರೆ. ಅಶ್ವಿನಿ ರೆಕಾರ್ಡಿಂಗ್ ಕಂಪನಿ ಈ ಆಲ್ಬಮ್ ನ್ನು ನಿರ್ಮಿಸಿದೆ.
ಇದರಲ್ಲಿ ಇನ್ನಷ್ಟು ಓದಿ :