ಡಿ ಬಾಸ್ ದರ್ಶನ್ ಅಭಿಮಾನಿಯಿಂದ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್

ಬೆಂಗಳೂರು, ಮಂಗಳವಾರ, 10 ಸೆಪ್ಟಂಬರ್ 2019 (09:27 IST)

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಹೆಸರಿನ ಟ್ವಿಟರ್ ಪೇಜ್ ಒಂದರಲ್ಲಿ ಕಿಚ್ಚ ಸುದೀಪ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಲಾಗಿದ್ದು, ಇದನ್ನು ದರ್ಶನ್ ಅಭಿಮಾನಿಗಳೇ ಖಂಡಿಸಿದ್ದಾರೆ.


 
ಪೈಲ್ವಾನ್ ಬಿಡುಗಡೆಗೆ ಎರಡೇ ದಿನ ಬಾಕಿಯಿರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಎಂದು ಹೇಳಿಕೊಳ್ಳುವ ಗುಂಪೊಂದು ತನ್ನ ಟ್ವಿಟರ್ ಪೇಜ್ ನಲ್ಲಿ ಇಬ್ಬರು ಸ್ಟಾರ್ ನಟರ ನಡುವೆ ಹೋಲಿಕೆ ಮಾಡಿ ಗೇಲಿ ಮಾಡಿದೆ. ದರ್ಶನ್ ಸ್ವಂತ ಬಲದಿಂದ ಮೇಲೆ ಬಂದವರು. ಆದರೆ ಸುದೀಪ್ ಮೊದಲ ಸಿನಿಮಾವೇ ತಮ್ಮ ತಂದೆಯ ಮಾಲಿಕತ್ವದ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಅಪ್ಪನ ದುಡ್ಡಿನಲ್ಲಿ ಮೇಲೆ ಬಂದವನು ಸ್ಯಾಂಡಲ್ ವುಡ್ ಉದ್ದಾರ ಮಾಡುತ್ತಾನಂತೆ ಎಂದು ಟ್ವಿಟರ್ ನಲ್ಲಿ ಅವಹೇಳನ ಮಾಡಿ ಬರೆಯಲಾಗಿದೆ.
 
ಇದನ್ನು ನೋಡಿರುವ ದರ್ಶನ್ ಅಭಿಮಾನಿಗಳೇ ತಿರುಗೇಟು ನೀಡಿದ್ದು, ಸುಮ್ಮನೇ ಇಬ್ಬರು ಸ್ಟಾರ್ ಗಳ ನಡುವೆ ತಂದಿಡುವ ಕೆಲಸ ಮಾಡಬೇಡಿ. ಇಬ್ಬರ ಅಭಿಮಾನಿ ಗುಂಪುಗಳ ನಡುವೆ ಆಗಾಗ ತಿಕ್ಕಾಟ ನಡೆಯುತ್ತಲೇ ಇರುತ್ತದೆ. ಆದರೆ ಇಂತಹ ಟ್ವೀಟ್ ಹರಿಯಬಿಟ್ಟು ಅನಗತ್ಯವಾಗಿ ಕಿಚ್ಚು ಹೆಚ್ಚಿಸುವ ಕೆಲಸ ಮಾಡಬೇಡಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ತುಳು ಭಾಷಿಕರಿಗೆ ಶಿವರಾಜ್ ಕುಮಾರ್ ಬೆಂಬಲ

ಬೆಂಗಳೂರು: ತುಳು ಭಾಷಿಕರ ಬಹುಕಾಲದ ಬೇಡಿಕೆಯೊಂದಕ್ಕೆ ಈಗ ಸ್ಯಾಂಡಲ್ ವುಡ್ ಸ್ಟಾರ್ ಶಿವರಾಜ್ ಕುಮಾರ್ ಬೆಂಬಲ ...

news

ಸ್ಪರುದ್ರೂಪಿ ನಟ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

ಬೆಂಗಳೂರು: ಬಹುಮುಖ ಪ್ರತಿಭೆ ರಮೇಶ್ ಅರವಿಂದ್ ಗೆ ಇಂದು ಜನ್ಮ ದಿನದ ಸಂಭ್ರಮ. ಈ ಬಾರಿ ರಮೇಶ್ ಜನ್ಮದಿನಕ್ಕೆ ...

news

ಮೇಘನಾ ಸರ್ಜಾ-ಸೃಜನ್ ಹೊಸ ಸಿನಿಮಾಗೆ ವಿಚಿತ್ರ ಟೈಟಲ್!

ಬೆಂಗಳೂರು: ನಟಿ ಮೇಘನಾ ಸರ್ಜಾ ಸಿನಿಮಾ ಸೃಜನ್ ಲೋಕೇಶ್ ಜತೆಗೆ ಹೊಸ ಸಿನಿಮಾವೊಂದರಲ್ಲಿ ಅಭಿನಯಿಸುತ್ತಿರುವ ...

news

ಗೋಲ್ಡನ್ ಸ್ಟಾರ್ ಗಣೇಶ್ ಗೀತಾ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್

ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗೀತಾ ಸಿನಿಮಾದ ಟ್ರೈಲರ್ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ...