ಬೆಂಗಳೂರು: ಈ ಬಾರಿ ಕಾಂಗ್ರೆಸ್ ಟಿಕೆಟ್ ಕೊಡಲಿ ಬಿಡಲಿ, ಮಂಡ್ಯ ಲೋಕಸಭಾ ಚುನಾವಣಾ ಕಣದಿಂದ ಸ್ಪರ್ಧಿಸುವುದು ಗ್ಯಾರಂಟಿ ಎಂದಿರುವ ರೆಬಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾಗೆ ಡಿ ಬಾಸ್ ದರ್ಶನ್ ಬೆಂಬಲ ನೀಡಿದ್ದಾರೆ.ಅಮ್ಮ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅವರ ಜತೆಗೆ ನಾವಿದ್ದೇವೆ. ಅವರು ಚುನಾವಣೆಗೆ ಸ್ಪರ್ಧಿಸುತ್ತಾರೆಂದರೆ ನಾವು ಪ್ರಚಾರಕ್ಕೆ ಹೋಗುತ್ತೇವೆ. ನಾನೂ ಅವರ ಮನೆಯವನಂತೆ. ಅವರ ಜತೆಗೆ ನಾನು ಯಾವತ್ತೂ ಇರುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.ಸುಮಲತಾ ಅಷ್ಟೇ ಅಲ್ಲ, ಈ