ಬೆಂಗಳೂರು: ನಟ, ನಿರೂಪಕ ಡ್ಯಾನಿಶ್ ಸೇಠ್ ಮೊನ್ನೆಯಷ್ಟೇ ತಮ್ಮ ಗೆಳತಿ ಅನ್ಯಾ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ಅವರು ಈಗಲೂ ನಾನು ಸಿಂಗಲ್ ಎಂದಿದ್ದಾರೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಿಸ್ಟರ್ ನ್ಯಾಗ್ಸ್ ಈ ರೀತಿ ಹೇಳಿಕೆ ಕೊಟ್ಟಿದ್ದೇಕೆ ಅಂತೀರಾ? ಇದೂ ಕೂಡಾ ನ್ಯಾಗ್ಸ್ ಟ್ರಿಕ್ಸ್!‘ನನ್ನ ಮದುವೆಯಾಗಿ ಎರಡು ದಿನಗಳಾಗಿದ್ದು, ನಿಮಗೆಲ್ಲಾ ಒಂದು ಸ್ಪಷ್ಟನೆ ನೀಡಲು ಬಯಸುತ್ತೇನೆ. ಮಿಸ್ಟರ್ ನ್ಯಾಗ್ಸ್ ಈಗಲೂ ಸೆಲ್ವಲಕ್ಷ್ಮಿ ಜೊತೆಗಿದ್ದಾನೆ. ಗೋಪಿ ಈಗಲೂ ಸಿಂಗಲ್. ಧನ್ಯವಾದಗಳು’