ಬೆಂಗಳೂರು: ಡಾರ್ಲಿಂಗ್ ಕೃಷ್ಣ ಅಭಿನಯಿಸಲಿರುವ ಹೊಸ ಸಿನಿಮಾ ವರ್ಜಿನ್ ವಿವಾದಾತ್ಮಕವಾದ ಟೈಟಲ್ ಆದ ಕಾರಣ ಚಿತ್ರತಂಡ ಟೈಟಲ್ ಬದಲಾಯಿಸಿದ್ದು, ಶೀಘ್ರಮೇವ ಕಲ್ಯಾಣಪ್ರಾಪ್ತಿರಸ್ತು ಎಂದು ಮರುನಾಮಕರಣ ಮಾಡಲಾಗಿದೆ.ಈ ಸಿನಿಮಾದಲ್ಲಿ ಕೃಷ್ಣನಿಗೆ ನಾಯಕಿಯಾಗಿ ನಿಮಿಕಾ ರತ್ನಾಕರ್ ಅಭಿನಯಿಸುತ್ತಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಸಿನಿಮಾ ರೊಮ್ಯಾಂಟಿಕ್ ಕಾಮಿಡಿ ಎಂಟರ್ ಟೈನರ್ ಆಗಲಿದ್ದು, ಪಕ್ಕಾ ಮನರಂಜನೆ ನಿರೀಕ್ಷಿಸಬಹುದು. ಸದ್ಯದಲ್ಲೇ ಚಿತ್ರೀಕರಣ ಶುರುವಾಗಲಿದೆ.