ದಿಲ್ ಪಸಂದ್ ಫಸ್ಟ್ ಲುಕ್ ಗೆ ಡೇಟ್ ಫಿಕ್ಸ್: ಡಾರ್ಲಿಂಗ್ ಕೃಷ್ಣ ಜೊತೆ ಯಾರಿರ್ತಾರೆ?

ಬೆಂಗಳೂರು| Krishnaveni K| Last Modified ಮಂಗಳವಾರ, 16 ನವೆಂಬರ್ 2021 (09:45 IST)
ಬೆಂಗಳೂರು: ನಾಯಕರಾಗಿರುವ ದಿಲ್ ಪಸಂದ್ ಸಿನಿಮಾ ಇತ್ತೀಚೆಗೆ ಸೆಟ್ಟೇರಿತ್ತು. ಇದೀಗ ಸಿನಿಮಾದ ಫಸ್ಟ್ ಲುಕ್ ಹೊರತರಲು ಚಿತ್ರತಂಡ ನಿರ್ಧರಿಸಿದೆ.

ನವಂಬರ್ 19 ರಂದು ಬೆಳಿಗ್ಗೆ 11 ಗಂಟೆಗೆ ಚಿತ್ರದ ಫಸ್ಟ್ ಲುಕ್ ಹೊರಬರಲಿದೆ. ಚಿತ್ರದಲ್ಲಿ ಕೃಷ್ಣಗೆ ಇಬ್ಬರು ನಾಯಕಿಯರಿದ್ದಾರೆ. ಮೇಘಾ ಶೆಟ್ಟಿ ಮತ್ತು ನಿಶ್ವಿಕಾ ನಾಯ್ಡು ಇದ್ದಾರೆ.
ಈ ಇಬ್ಬರ ಪೈಕಿ ಮೊದಲ ಪೋಸ್ಟರ್ ನಲ್ಲಿ ಕೃಷ್ಣ ಜೊತೆಗೆ ಕಾಣಿಸಿಕೊಳ್ಳುವವರು ಯಾರು ಎಂಬ ಕುತೂಹಲ ಅಭಿಮಾನಿಗಳಲ್ಲಿದೆ.


ಈಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಶಿವ ತೇಜಸ್ ನಿರ್ದೇಶಿಸಿರುವ ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :