ಬೆಂಗಳೂರು: ರಿಯಲ್ ಲೈಫ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಮಾಕ್ಟೇಲ್ ಸಿನಿಮಾದಲ್ಲಿ ಮಾಡಿದ ಮೋಡಿ ಎಲ್ಲರಿಗೂ ಗೊತ್ತೇ ಇದೆ. ಈ ಜೋಡಿ ಮತ್ತೆ ಈಗ ಲವ್ ಬರ್ಡ್ಸ್ ಆಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ಜೊತೆಯಾಗಿ ನಟಿಸಲಿರುವ ಸಿನಿಮಾವೊಂದು ಅನೌನ್ಸ್ ಆಗಿದ್ದು, ಇದಕ್ಕೆ ಲವ್ ಬರ್ಡ್ಸ್ ಎಂದು ಹೆಸರಿಡಲಾಗಿದೆ. ಸದ್ಯದಲ್ಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.ಟೈಟಲ್ಲೇ ಹೇಳುವಂತೆ ಇದೊಂದು ಲವ್ ಎಂಟರ್ ಟೈನರ್ ಆಗಿರಲಿದೆ.