ಪುನೀತ್ ಹೃದಯವಂತಿಕೆಗೆ ಡಾರ್ಲಿಂಗ್ ಕೃಷ್ಣ ಪ್ರಕಟಿಸಿದ ಈ ವಿಡಿಯೋ ಸಾಕ್ಷಿ!

ಬೆಂಗಳೂರು| Krishnaveni K| Last Modified ಮಂಗಳವಾರ, 2 ನವೆಂಬರ್ 2021 (11:09 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದಷ್ಟೇ ತಮ್ಮ ಸಹಕಲಾವಿದರ ಬಗ್ಗೆ ತೋರುತ್ತಿದ್ದ ಕಾಳಜಿಯಿಂದಲೂ ಎಲ್ಲರಿಗೂ ಇಷ್ಟವಾಗುತ್ತಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ಅವರ ಜೊತೆ ಕೆಲವು ಸಿನಿಮಾಗಳಲ್ಲಿ ತೆರೆ ಹಂಚಿದ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಜಾಕಿ ಸಿನಿಮಾ ಶೂಟಿಂಗ್ ವೇಳೆ ತಮ್ಮ ಹಾಗೂ ಪವರ್ ಸ್ಟಾರ್ ಪುನೀತ್ ನಡುವಿನ ಫೈಟಿಂಗ್ ದೃಶ‍್ಯವೊಂದರ ವಿಡಿಯೋ ಪ್ರಕಟಿಸಿದ್ದಾರೆ. ಪುನೀತ್ ಈ ದೃಶ‍್ಯದಲ್ಲಿ ಕೃಷ್ಣ ತಲೆಗೆ ಜೋರಾಗಿ ಏಟು ಹೊಡೆಯಬೇಕು.


ಈ ವೇಳೆ ಕೃಷ್ಣಗೆ ಸಣ್ಣ ಪುಟ್ಟ ಗಾಯವಾಗುತ್ತದೆ. ಶಾಟ್ ಕಟ್ ಎಂದ ತಕ್ಷಣವೇ ಕೃಷ್ಣ ಬಳಿ ತೆರಳಿ ಸಹಾಯಕರಿದ್ದರೂ ತಾವೇ ಅವರ ಕ್ಷೇಮ ವಿಚಾರಿಸುವ ಪುನೀತ್ ಅವರ ತಲೆಗೆ ತಗುಲಿದ್ದ ಕಸ ಕಡ್ಡಿಯನ್ನೆಲ್ಲಾ ತೆಗೆಯುತ್ತಾರೆ. ಪವರ್ ಸ್ಟಾರ್ ಅಪ್ಪು ಎಂದರೆ ಹೀಗೇ ಇದ್ದರು ಎಂದು ಕೃಷ್ಣ ಭಾವುಕರಾಗಿ ಬರೆದುಕೊಂಡಿದ್ದಾರೆ.


ಇದರಲ್ಲಿ ಇನ್ನಷ್ಟು ಓದಿ :