ಬೆಂಗಳೂರು: ಡಾರ್ಲಿಂಗ್ ಕೃಷ್ಣ ಯುಗಾದಿ ಹಬ್ಬದಂದು ಲವ್ ಮಾಕ್ಟೇಲ್ 3 ಸಿನಿಮಾಗೆ ಸಿದ್ಧತೆ ನಡೆಸುತ್ತಿರುವುದಾಗಿ ಘೋಷಿಸಿದ್ದರು. ಆದರೆ ಇದು ನೆಟ್ಟಿಗರಿಗೆ ಇಷ್ಟವಾಗಿಲ್ಲ.ಲವ್ ಮಾಕ್ಟೇಲ್ 1 ನಿರ್ದೇಶಕನಾಗಿ, ನಟನಾಗಿ ಡಾರ್ಲಿಂಗ್ ಕೃಷ್ಣನಿಗೆ ದೊಡ್ಡ ಮಟ್ಟಿನ ಯಶಸ್ಸು ತಂದುಕೊಟ್ಟಿತ್ತು. ಆದರೆ ಲವ್ ಮಾಕ್ಟೇಲ್ 2 ಅಷ್ಟೊಂದು ಯಶಸ್ವಿಯಾಗಿರಲಿಲ್ಲ. ಆದರೆ ಈಗ ಲವ್ ಮಾಕ್ಟೇಲ್ 3 ಮಾಡಲು ಹೊರಟಿರುವ ವಿಚಾರ ಕೇಳಿದ ಮೇಲೆ ನೆಟ್ಟಿಗರು ನಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.ಲವ್ ಮಾಕ್ಟೇಲ್ 3 ಬೇಡ ಗುರೂ.