ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕಲಾಸಿಪಾಳ್ಯ’ ಸಿನಿಮಾಗೆ 16 ವರ್ಷ

ಬೆಂಗಳೂರು| Krishnaveni K| Last Modified ಗುರುವಾರ, 15 ಅಕ್ಟೋಬರ್ 2020 (11:05 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಬ್ರೇಕ್ ಕೊಟ್ಟ ಸಿನಿಮಾಗಳಲ್ಲಿ ಮೊದಲನೇ ಸಾಲಿನಲ್ಲಿ ಬರುವುದು ಕಲಾಸಿ ಪಾಳ್ಯ. ಈ ಸಿನಿಮಾ ಬಿಡುಗಡೆಯಾಗಿ ಇಂದಿಗೆ 16 ವರ್ಷ.

 
ದರ್ಶನ್ ಮತ್ತು ರಕ್ಷಿತಾ ನಾಯಕ-ನಾಯಕಿಯಾಗಿ ಅಭಿನಯಿಸಿದ್ದ ಈ ಸಿನಿಮಾ 100 ದಿನ ಓಡಿತ್ತು. ಈ ಸಿನಿಮಾವನ್ನು ಈಗಲೂ ದರ್ಶನ್ ನೆನೆಸಿಕೊಳ್ಳುತ್ತಾರೆ. ದರ್ಶನ್ ಮಾಸ್ ಲುಕ್, ಅದರ ಹಾಡುಗಳು ಇಂದಿಗೂ ಅಭಿಮಾನಿಗಳಿಗೆ ಅಚ್ಚುಮೆಚ್ಚು. ಇನ್ನು, ತಮ್ಮ ಮೆಚ್ಚಿನ ದಾಸನ ಸಿನಿಮಾ ಬಿಡುಗಡೆಯಾಗಿ 16 ವರ್ಷ ತುಂಬಿದ ಹಿನ್ನಲೆಯಲ್ಲಿ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಕಲಾಸಿಪಾಳ್ಯ ಸಿನಿಮಾ ನೆನಪುಗಳನ್ನು ವಿಶೇಷ ಸಿಡಿಪಿಗಳ ಮೂಲಕ ಟ್ರೆಂಡ್ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :